Facebook
Twitter
LinkedIn

ಸೆ.1:ಪ್ರಗತಿ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಮತ್ತು ಪ್ರಗತಿ ಸ್ಪೆಶಾಲಿಟಿ ಆಸ್ಪತ್ರೆ ಪುತ್ತೂರು ಇದರ ಸಹಯೋಗದೊಂದಿಗೆ
ನಿರಂತರ ಮಾಸಿಕ ಉಚಿತ ಆರೋಗ್ಯ ತಪಾಸಣಾ ಶಿಬಿರವು ಸೆ.1 ರಂದು ಆದಿತ್ಯವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ
ಬೊಳ್ವಾರು ಪ್ರಗತಿ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಜರಗಲಿದೆ.
ರಕ್ತದೊತ್ತಡ, ಬಿ.ಪಿ ಪರೀಕ್ಷೆ, ಮಧುಮೇಹ, ಸಕ್ಕರೆ ಕಾಯಿಲೆ ತಪಾಸಣೆ, ಅಸ್ತಮಾ, ಸೇವ್ ಹಾರ್ಟ್ ಪರೀಕ್ಷೆ, ಹೃದಯದ
ತಪಾಸಣೆಗಾಗಿ ಇಸಿಜಿ, ಶ್ವಾಸಕೋಶ, ಥೈರಾಯಿಡ್, HBA1C, ಯೂರಿಕ್ ಆಸಿಡ್, ಪ್ರಾಸ್ಪೇಟ್ ಗ್ರಂಥಿ ಪರೀಕ್ಷೆ, ಲಿವರ್
ಫೈಬ್ರೋಸ್ಕ್ಯಾನ್, ಮೂಳೆ ಸಾಂದ್ರತೆ ತಪಾಸಣೆ, ಕೊಬ್ಬಿನಾಂಶ ತಪಾಸಣೆಗಾಗಿ ಲಿಪಿಡ್ ಪ್ರೊಫೈಲ್, ಸ್ತನ ಕಾಯಿಲೆ
ತಪಾಸಣೆ, ನರ ಸೂಕ್ಷ್ಮತೆ ಪರೀಕ್ಷೆ ಮತ್ತು ಮಕ್ಕಳ ಆರೋಗ್ಯ ತಪಾಸಣೆ ನಡೆಯಲಿದ್ದು ಫಲಾನುಭವಿಗಳು ಇದರ
ಪ್ರಯೋಜನ ಪಡೆದುಕೊಳ್ಳಬೇಕು ಹಾಗೂ ಹೆಚ್ಚಿನ ಮಾಹಿತಿಗಾಗಿ 9483127777, 9448126326,
9483787876 ನಂಬರಿಗೆ ಸಂಪರ್ಕಿಸಬಹುದಾಗಿದೆ ಎಂದು ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪ್ರಕಾಶ್ ಬಿ,
ಕಾರ್ಯದರ್ಶಿ ಪ್ರೊ|ಸುಬ್ಬಪ್ಪ ಕೈಕಂಬ, ಸಮುದಾಯ ಸೇವಾ ವಿಭಾಗದ ನಿರ್ದೇಶಕ ಗುರುರಾಜ್ ಕೊಳತ್ತಾಯ ಹಾಗೂ
ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆ ಪ್ರಕಟಣೆ ತಿಳಿಸಿದೆ.
ಬಾಕ್ಸ್
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಡಾ.ಯು.ಪಿ
ಶಿವಾನಂದರವರು ಭಾಗವಹಿಸಲಿದ್ದಾರೆ.

Leave a Comment

Your email address will not be published. Required fields are marked *

Related Posts

Pragathi Allied Health Science

ಪುತ್ತೂರಿನ ಪ್ರಗತಿ ಅಲೈಡ್ ಹೆಲ್ತ್ ಸೈನ್ಸ್ ಕಾಲೇಜಿಗೆ ಶೇ. 100 ಫಲಿತಾಂಶ

Pragathi New College

ಬೊಳುವಾರಿನ ಪ್ರಗತಿ ಹಾಸ್ಪಿಟಲ್ ಎಜುಕೇಶನ್ ಟ್ರಸ್ಟ್‌ನ ಹೊಸ ಕಾಲೇಜು ಕ್ಯಾಂಪಸ್ ಉದ್ಘಾಟನೆ

Puttur Rotary Mammography Centre

Opening Ceremony of the Puttur Rotary Mammography Centre

Scroll to Top