Facebook
Twitter
LinkedIn

ಅ.1:ಪ್ರಗತಿ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಉಚಿತ ಮಾಸಿಕ ಆರೋಗ್ಯ ತಪಾಸಣಾ ಶಿಬಿರ

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಮತ್ತು ಪ್ರಗತಿ ಸ್ಪೆಶಾಲಿಟಿ ಆಸ್ಪತ್ರೆ ಪುತ್ತೂರು ಇದರ ಸಹಯೋಗದೊಂದಿಗೆ
ನಿರಂತರ ಮಾಸಿಕ ಉಚಿತ ಆರೋಗ್ಯ ತಪಾಸಣಾ ಶಿಬಿರವು ಅ.1 ರಂದು ಆದಿತ್ಯವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ
ಬೊಳ್ವಾರು ಪ್ರಗತಿ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಜರಗಲಿದೆ.

ರಕ್ತದೊತ್ತಡ, ಬಿ.ಪಿ ಪರೀಕ್ಷೆ, ಮಧುಮೇಹ, ಸಕ್ಕರೆ ಕಾಯಿಲೆ ತಪಾಸಣೆ, ಥೈರಾಯಿಡ್, ಮಕ್ಕಳ ಆರೋಗ್ಯ ತಪಾಸಣೆ,
ಹೃದಯದ ತಪಾಸಣೆಗಾಗಿ ಇಸಿಜಿ, ಅಸ್ತಮಾ, ಸೇವ್ ಹಾರ್ಟ್ ಪರೀಕ್ಷೆ, , ಶ್ವಾಸಕೋಶ ಕಾಯಿಲೆ ತಪಾಸಣೆಗಾಗಿ
ಸ್ಪೈರೋಮೆಟ್ರಿ, ಕ್ಯಾಲ್ಸಿಯಂ ಪರೀಕ್ಷೆ, ಸ್ತನ ಕಾಯಿಲೆ ತಪಾಸಣೆ, ಬಂಜೆತನ ತಪಾಸಣೆ ಹಾಗೂ ಮಾಹಿತಿ ಶಿಬಿರ
ನಡೆಯಲಿದ್ದು ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಹಾಗೂ ಹೆಚ್ಚಿನ ಮಾಹಿತಿಗಾಗಿ
9483127777, 9448126326, 9483787876 ನಂಬರಿಗೆ ಸಂಪರ್ಕಿಸಬಹುದಾಗಿದೆ ಎಂದು ರೋಟರಿ ಕ್ಲಬ್
ಪುತ್ತೂರು ಅಧ್ಯಕ್ಷ ಡಾ.ಶ್ರೀಪ್ರಕಾಶ್ ಬಿ, ಕಾರ್ಯದರ್ಶಿ ಪ್ರೊ|ಸುಬ್ಬಪ್ಪ ಕೈಕಂಬ, ಸಮುದಾಯ ಸೇವಾ ವಿಭಾಗದ
ನಿರ್ದೇಶಕ ಗುರುರಾಜ್ ಕೊಳತ್ತಾಯ ಹಾಗೂ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್
ಡಾ.ಯು.ಶ್ರೀಪತಿ ರಾವ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಿಗ್ಗೆ 9 ಗಂಟೆಗೆ ಆಸ್ಪತ್ರೆಯ ವತಿಯಿಂದ ಆಯುಧ ಪೂಜೆ ನೆರವೇರಲಿದೆ.

Leave a Comment

Your email address will not be published. Required fields are marked *

Related Posts

WhatsApp Image 2025-11-03 at 5.11

Annual Sports day KRIDA-2025

WhatsApp Image 2025-11-03 at 5.05

Annual Day Celebration Dazzle-2025

WhatsApp Image 2025-11-03 at 5.06

Sharada Pooja-2025

Scroll to Top